1887ರಲ್ಲಿ ಭಾರತದಲ್ಲಿ ಆಗಿನ್ನೂ ಸ್ವಾತಂತ್ರ್ಯದ ಕಿಡಿ ಹೊತ್ತುತ್ತಿತ್ತು.
ಅಂತಹ ಸಮಯದಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿ ಕಡು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರೇ
ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್. ಇವರ
ಜೀವನವನ್ನು ಅಧ್ಯಯನ ಮಾಡಿದರೆ ಸ್ವಾತಂತ್ರ್ಯವು ಕಾಡಿರುವ
ಕುರುಹು ಕಾಣದು. ಆದರೆ ಪ್ರತೀ ಕ್ಷಣವೂ ಗಣಿತವನ್ನೇ
ಧ್ಯಾನಿಸಿದ್ದ ರಾಮಾನುಜನ್ ಅವರ ಅಪ್ರತಿಮ ಪ್ರತಿಭೆಯಿಂದ ಭಾರತದ ಕೀರ್ತಿಯನ್ನು ಎತ್ತರಿಸಿದರು. ಅದಕ್ಕಾಗೆ
ನನಗೆ ಪ್ರತೀ ಸ್ವಾತಂತ್ರ್ಯ ಹೋರಾಟಗಾರನ ಮೇಲೆ ಇರುವಷ್ಟೆ ಪ್ರೀತಿ-ಆದರ ಇವರ ಮೇಲಿದೆ. ಇದು ಪ್ರತೀ
ಗಣಿತ ಶಿಕ್ಷಕನಿಗೆ ಇರಬೇಕಾದದ್ದೆ.
ರಾಮಾನುಜನ್ ಬಡತನದಲ್ಲಿ ಅರಳಿದ ಪ್ರತಿಭೆ. ಅವರ ಈ ಕಾರ್ಯಕ್ಕೆ ಬಡತನವಾಗಲೀ ಅವರ ಆರೋಗ್ಯವಾಗಲೀ
ಲೆಕ್ಕಕ್ಕೇ ಬರಲಿಲ್ಲ. ಆದರೂ ವಾಸ್ತವ ಬದುಕಿಗಾಗಿ ಹಣ ಮತ್ತು ಆರೋಗ್ಯ ಬೇಕಿದ್ದರಿಂದ ಜೀವನ ನಿರ್ವಹಣೆಗಾಗಿ
ಸಣ್ಣ ನೌಕರಿ ಮಾಡಬೇಕಾಗಿತ್ತು. ಅದಕ್ಕಾಗಿ ಪರಿಶ್ರಮಿಸಿದರು. ಅವರ ತಮಿಳುನಾಡಿನಿಂದ ಲಂಡನ್‌ವರೆಗಿನ
ಭೌತಿಕ ಪಯಣವಷ್ಟೇ ನಮಗೆ ಕಾಣಿಸದು ಬದಲಾಗಿ ಗಣಿತಲೋಕದಲ್ಲಿ ಅವರ ಪಯಣ 'ಅನಂತದೆಡೆಗೆ...' ಗೋಚರಿಸುತ್ತದೆ.
1887ರ ಡಿಸೆಂಬರ್ 22ರಂದು ತಮಿಳುನಾಡಿನ ಈರೋಡ್‌ನಲ್ಲಿ ಶ್ರೀನಿವಾಸ ಅಯ್ಯಂಗಾರ್
ಹಾಗೂ ಕೋಮಲಮ್ಮಾಳ್ ದಂಪತಿಯ ಮಗನಾಗಿ ಹುಟ್ಟಿದ ರಾಮಾನುಜರ ಬಾಲ್ಯ ಶಿಕ್ಷಣವು ಕುಂಭಕೋಣದಲ್ಲಿ ಆಯಿತು.
ಆಗಲೇ ತಮ್ಮ ಗಮನವನ್ನು ಗಣಿತದೆಡೆಗೆ ನೆಟ್ಟ ಬಾಲಕ ರಾಮಾನುಜನ್ ಬದುಕಿದ್ದಷ್ಟು ಕಾಲ ಗಣಿತ ಲೋಕದಲ್ಲೆ
ವಿಹರಿಸಿ ಚಿರಸ್ಥಾಯಿಯಾದರು. ಹದಿಮೂರನೇ ವಯಸ್ಸಿನಲ್ಲಿ 'ಜಾರ್ಜ್ ಎಸ್.ಕಾರ್' ಬರೆದ ‘synopsis of elimentary
results in pure mathematics’ ಓದಿ ತಾವೇ ಸಮಸ್ಯೆಗಳನ್ನು
ಬಿಡಿಸಿದರು ಹಾಗೂ 'ಲೋನಿ' ಬರೆದ 'ಟ್ರಿಗ್ನಾಮಿಟ್ರಿ'ಯನ್ನು ಓದಿ ಅರ್ಥೈಸಿಕೊಂಡ ಬಳಿಕ ಅಗಾಧವಾದ ಗಣಿತದಾಹ ಕಾಡತೊಡಗಿತು.
ಹಾಗಾಗಿ ಆಟದ ಕಡೆ ಇರಬೇಕಿದ್ದ ಗಮನ ಗಣಿತದ ಕಡೆ ವಾಲಿತು. ಆಗಲೇ ತನಗಿಂತ ಹಿರಿಯರನ್ನು 'ಗಣಿತದ ಅತಿ ದೊಡ್ಡ ಸತ್ಯ ಯಾವುದು?' ಎಂದು ಕೇಳುತ್ತಿದ್ದರಂತೆ.
ಜೀವನದ ಪರಮಸತ್ಯ ಯಾವುದೆಂದು ತಿಳಿಯಲು ಸಾಂಸಾರಿಕ ಜೀವನ ತೊರೆದು ಹುಡುಕಲು ಹೊರಡುವವರಂತೆ! ಆದರೆ ಜೀವನದ
ಸತ್ಯ ತಿಳಿಯಲು ಎಲ್ಲಾ ಹಂತ ಮುಗಿದು ಇತರರು ಹೊರಟರೆ ರಾಮಾನುಜನ್ ತಮ್ಮ ಹದಿಮೂರನೇ ವಯಸ್ಸಿನಲ್ಲೇ ಹೊರಡುತ್ತಾರೆ.
ಅದೇ ವಯಸ್ಸಿನಲ್ಲಿದ್ದಾಗ ಒಮ್ಮೆ ಅವರ ಗುರುಗಳು ಸಾವಿರ ಬಾಳೆಹಣ್ಣುಗಳನ್ನು ಸಾವಿರ ಹುಡುಗರಿಗೆ
ಹಂಚಿದರೆ ಪ್ರತಿಯೊಬ್ಬರಿಗೂ ಒಂದು ಹಣ್ಣು ಸಿಗುತ್ತದೆ ತಾನೆ? ಎಂದು ಕೇಳಿದಾಗ ರಾಮಾನುಜನ್ ಸಾರ್, ಇಲ್ಲದ ಹಣ್ಣುಗಳನ್ನು
ಇಲ್ಲದ ಹುಡುಗರಿಗೆ ಹಂಚಿದರೆ ಒಬ್ಬೊಬ್ಬನೂ ಒಂದೊಂದು ಬಾಳೆಹಣ್ಣನ್ನು ಪಡೆಯುತ್ತಾನೆಯೇ? ಎಂದು ಕೇಳಿದರು. ಈ ರೀತಿಯ ಅಸಾಧಾರಣ ಪ್ರಶ್ನೆಗಳು ರಾಮಾನುಜನ್‌ರ ಮನದಲ್ಲಿ ಸುಳಿದಾಡುತ್ತಿದ್ದವು.
ಪ್ರೌಢಶಾಲೆಯಲ್ಲಿದ್ದಾಗಲೇ ಬಿ.ಎ. ವಿದ್ಯಾರ್ಥಿಗಳಿಗೆ ಗಣಿತದ ನೆರವನ್ನು ನೀಡುತ್ತಿದ್ದರಂತೆ.
ಅಂದರೆ ಅವರ ಅಸಾಧಾರಣ ಪ್ರತಿಭೆಯು ಬಾಲ್ಯದಲ್ಲಿಯೇ ಹೊರಹೊಮ್ಮಿತ್ತೆಂದು ವೇದ್ಯವಾಗುತ್ತದೆ.
ರಾಮಾನುಜನ್‌ಗೆ ಗಣಿತದ ಹೊರತಾಗಿ ಬೇರೆ ಯಾವುದೇ ವಿಷಯದಲ್ಲೂ ಆಸಕ್ತಿ ಇರಲಿಲ್ಲ. 1907 ರಿಂದ 1911 ರ ವರೆಗೆ ಅವರು ಮಾಯಾಚೌಕಗಳು, ಸಂಖ್ಯಾಸಿದ್ಧಾಂತ, ಎಲಿಪ್ಟಿಕಲ್ ಇಂಟಿಗ್ರಲ್ಸ್ ಇತ್ಯಾದಿ ಗಣಿತದ ಸಮಸ್ಯೆಗಳನ್ನು
ತಾವೇ ಸೃಷ್ಟಿಸಿಕೊಂಡು ಅದನ್ನು ಪರಿಹರಿಸುತ್ತಿದ್ದರು. ಹೀಗೆ ಅವರು ಸಾಕಷ್ಟು ಏಳುಬೀಳಿನ ನಡುವೆಯೂ
ಗಣಿತಾಸಕ್ತಿಯನ್ನು ಬಿಡದೆ ಸರ್ಕಾರದ ಸ್ಕಾಲರ್‌ಶಿಪ್‌ನಿಂದಾಗಿ ಲಂಡನ್‌ಗೆ ತೆರಳಿ ಜೆ.ಹೆಚ್.ಹಾರ್ಡಿಯವರೊಡನೆ
ಸೇರಿ ವಿಭಾಗೀಕರಣ ಫಲನ, ಉಚ್ಛ ಅತ್ಯಂತ ಅವಿಭಾಜ್ಯ ಸಂಖ್ಯೆಗಳು, ವರ್ಗಗಳ ಮೊತ್ತಗಳಾಗಿ ಸಂಖ್ಯೆಗಳ ನಿರೂಪಣೆ, ಸಂತತ ಭಿನ್ನರಾಶಿಗಳು, ಟೋಫಲನದ ಬಗ್ಗೆ ಸಂಶೋಧನೆ ಕೈಗೊಂಡರು.
ಹಾರ್ಡಿಯವರು ರಾಮಾನುಜನ್‌ರ
ಬೆಂಬಲಕ್ಕೆ ನಿಂತು ಮದ್ರಾಸ್ ಸರ್ಕಾರ ನೀಡುವ ಸ್ಕಾಲರ್‌ಶಿಪ್‌ನ್ನು ಮುಂದುವರೆಸುವಂತೆ ಪತ್ರ ಬರೆದರು, ಲಂಡನ್ನಿನ ಗಣಿತ ಸಂಘಕ್ಕೆ ಸದಸ್ಯರಾಗಿಸಿದರು, ಇತರ ಗಣಿತಜ್ಞರ ನೆರವಿನೊಂದಿಗೆ
ರಾಯಲ್ ಸೊಸೈಟಿಯ ಫೆಲೋ ಆಗಿ ಮಾಡಿದರು. ಅದಲ್ಲದೇ ರಾಮಾನುಜರ ಅನಾರೋಗ್ಯದ ಕಾರಣದಿಂದ ಉಂಟಾಗಿದ್ದ ಖಿನ್ನತೆಯನ್ನು....
ದೂರವಾಗಿಸಿದರು. ಮತ್ತು
1918ರಲ್ಲಿ 104 ಹಿರಿಯ ವಿಜ್ಞಾನಿಗಳಲ್ಲಿ
ಕೇವಲ 15 ಜನರನ್ನು ಫೆಲೋಗಳೆಂದು
ಆಯ್ಕೆ ಮಾಡಿದರು. ಒಟ್ಟಿನಲ್ಲಿ ಹಾರ್ಡಿ-ರಾಮಾನುಜನ್‌ರ ಸಂಬಂಧ ಅತ್ಯಂತ ಆಪ್ತವಾಗಿತ್ತು.
ಮೊದಲ ಮಹಾಯುದ್ಧ ತಣ್ಣಗಾದ ತರುವಾಯ ರಾಮಾನುಜನ್‌ರ ಆರೋಗ್ಯ ಬಹಳ ಹದಗೆಡಲು ಪ್ರಾರಂಭಿಸಿತು. ಆಂಗ್ಲ
ಸ್ನೇಹಿತರನ್ನು ಒಲ್ಲದ ಮನಸ್ಸಿನಿಂದ ಬಿಟ್ಟು ಭಾರತಕ್ಕೆ ಬಂದರು. ಆದರೆ ಬಹಳ ವರ್ಷ ಇಲ್ಲಿ ಉಳಿಯಲು
ಸಾಧ್ಯವಾಗದಿದ್ದದ್ದು ಭಾರತೀಯರ ದುರ್ದೈವ. ಅತಿ ಚಿಕ್ಕ ವಯಸ್ಸಿನಲ್ಲಿ ವಿಧಿ ಅವರನ್ನು ಕರೆದೊಯ್ದರು
ಅವರ ಕೊಡುಗೆ ಹಾಗೂ ನೆನಪನ್ನು ಮಾತ್ರ ಯಾರೂ ಕರೆದೊಯ್ಯಲು ಸಾಧ್ಯವಿಲ್ಲ.
ಮೊದಲ ಮಹಾಯುದ್ಧ ತಣ್ಣಗಾದ ತರುವಾಯ ರಾಮಾನುಜನ್‌ರ ಆರೋಗ್ಯ ಬಹಳ ಹದಗೆಡಲು ಪ್ರಾರಂಭಿಸಿತು. ಆಂಗ್ಲ
ಸ್ನೇಹಿತರನ್ನು ಒಲ್ಲದ ಮನಸ್ಸಿನಿಂದ ಬಿಟ್ಟು ಭಾರತಕ್ಕೆ ಬಂದರು. ಆದರೆ ಬಹಳ ವರ್ಷ ಇಲ್ಲಿ ಉಳಿಯಲು
ಸಾಧ್ಯವಾಗದಿದ್ದದ್ದು ಭಾರತೀಯರ ದುರ್ದೈವ. ಅತಿ ಚಿಕ್ಕ ವಯಸ್ಸಿನಲ್ಲಿ ವಿಧಿ ಅವರನ್ನು ಕರೆದೊಯ್ದರು
ಅವರ ಕೊಡುಗೆ ಹಾಗೂ ನೆನಪನ್ನು ಮಾತ್ರ ಯಾರೂ ಕರೆದೊಯ್ಯಲು ಸಾಧ್ಯವಿಲ್ಲ.
(ಫೋಟೋ ಕೃಪೆ : ಅಂತರ್ಜಾಲ)