ಇಂದ್ರಜಾಲ ಗಣಿತ - ಕಿರಣ್‌ಹೊಳ್ಳ ವಿ.




1. ಬೆಸ್ತು ಬಿದ್ದ ಬಂಗಾರ ಶೆಟ್ಟಿ: ಗಿರಿಜಮ್ಮ ಬಂಗಾರಶೆಟ್ಟಿ ಅಂಗಡಿಯಲ್ಲಿ 95 ರೂಪಾಯಿಗಳಿಗೆ ಒಂದು ಸೀರೆ ಕೊಂಡಳು. ಆಕೆ ಕೊಟ್ಟ ನೂರು ರೂಪಾಯಿ ನೋಟಿಗೆ ಚಿಲ್ಲರೆ ಇರಲಿಲ್ಲವಾದ ಕಾರಣ
ಬಂಗಾರಶೆಟ್ಟಿ ಪಕ್ಕದ ಅಂಗಡಿ ಕರಿಯಣ್ಣನಿಂದ ನೂರುರೂಪಾಯಿ ನೋಟಿಗೆ ಚಿಲ್ಲರೆ ತಂದು, ಅದರಲ್ಲಿ ಗಿರಿಜಮ್ಮನಿಗೆ 5 ರೂಪಾಯಿ ಕೊಟ್ಟು ಕಳುಹಿಸಿದನು. ಸ್ವಲ್ಪ ಹೊತ್ತಿನ ನಂತರ ಕರಿಯಣ್ಣನು ಬಂದು ಖೋಟಾ ನೋಟು ಎಂಬುದಾಗಿ ಹೇಳಿ ಆ ನೋಟನ್ನು ಬಂಗಾರಶೆಟ್ಟಿಗೆ ಹಿಂದಿರುಗಿಸಿ 100 ರೂಪಾಯಿಯ ಚೆಕ್ಕನ್ನು ಪಡೆದನು. ಈ ವ್ಯವಹಾರದಲ್ಲಿ ಬಂಗಾರಶೆಟ್ಟಿಗೆ ಆದ ನಷ್ಟ 200. ಇದು ಸರಿಯೋ ತಪ್ಪೋ? ಸಮಸ್ಯೆ ಬಗೆಹರಿಯದಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಚರ್ಚಿಸಿ.

2. ನವಕೋಟಿ ನಾರಾಯಣ: ಇದು ನಮ್ಮೂರಿನ ಆಗರ್ಭ ಶ್ರೀಮಂತ ಪಡೆದ ಬಿರುದು. ಈ ನಾರಾಯಣ ಶೆಟ್ಟಿಯಲ್ಲಿ ಒಂಭತ್ತು ಕೋಟಿ ರೂಪಾಯಿ ಮೌಲ್ಯದ ಒಂದು ರೂಪಾಯಿಯ ನೋಟುಗಳು ಇವೆಯೆಂದು ಭಾವಿಸೋಣ. ಪ್ರತೀ ಸೆಕುಂಡಿಗೆ ಒಂದು ನೋಟಿನಂತೆ ಎಣಿಕೆ ಮಾಡುವುದಾದರೆ ಒಂಭತ್ತು ಕೋಟಿ ನೋಟುಗಳನ್ನು ಎಣಿಸಲು ಎಷ್ಟು ಕಾಲ ಬೇಕು? (ಇಲ್ಲಿ ನಿದ್ದೆ ಆಹಾರ ಮತ್ತು ದೈನಂದಿನ ಚಟುವಟಿಕೆಗಳನ್ನು ತೊರೆದು ಹಗಲು ರಾತ್ರಿ ಎಣಿಕೆ ಮುಂದುವರಿಸಲಾಗುವುದೆಂದು ತಿಳಿಯಬೇಕು.)

3. ಕೈ ಚಳಕ: 
1
2



3
4
5
ಜೇಬುಗಳ್ಳರಿಗೆ ಕೈ ಚಳಕವಿಲ್ಲದಿದ್ದರೆ ಕಾರ್ಯ ಸಾಧನೆಯಾಗದು. ಐಂದ್ರಚಾಲಕನಿಗೂ ಕೈಚಳಕವಿರಬೇಕು. ಹಾಗೆಯೇ ಗಣಿತ ಕಲಾವಿದನಿಗೆ ಚುರುಕು ಬುದ್ಧಿಯ ಜೊತೆಗೆ ಕೈ ಚಳಕವೂ ಇರಬೇಕಾದದ್ದು ಅಗತ್ಯ. ಬೆಂಕಿಕಡ್ಡಿ ಸಹಾಯದಿಂದ ಮೇಲಿನ ಚಿತ್ರದಲ್ಲಿ ತೋರಿಸಿದಂತೆ ಐದು ಚಚ್ಚೌಕಗಳನ್ನು ರಚಿಸಿ. ಇಲ್ಲಿ ಉಪಯೋಗಿಸಲಾಗಿರುವ ಬೆಂಕಿಕಡ್ಡಿಗಳಲ್ಲಿ ಎರಡನ್ನು ಮಾತ್ರ ಸ್ಥಳಾಂತರ ಮಾಡಿದಲ್ಲಿ ಚೌಕಗಳ ಸಂಖ್ಯೆ ನಾಲ್ಕಕ್ಕೆ ಇಳಿಯುವುದು. ಆದರೆ ಯಾವುದೇ ಬೆಂಕಿಕಡ್ಡಿಯನ್ನು ತೆಗೆದುಹಾಕಬಾರದು. ಪ್ರಯತ್ನಿಸಿ ನೋಡಿ.

4. ತಾತ, ಮೊಮ್ಮಗ ಸಮ ವಯಸ್ಕರು:  1976ರ ವೇಳೆಗೆ ನನ್ನ ವಯಸ್ಸು ನಾನು ಹುಟ್ಟಿದ ವರ್ಷದ ಕೊನೆಯ ಎರಡು ಅಂಕೆಗಳಷ್ಟಾಗಿತ್ತು. ಅದೇ ವರ್ಷ ನನ್ನ ತಾತನ ವಯಸ್ಸೂ ಆತ ಹುಟ್ಟಿದ ವರ್ಷದ ಕೊನೆಯ ಎರಡು ಅಂಕಗಳಷ್ಟೇ ಆಗಿತ್ತು. ಹಾಗಾದರೆ 1976ರಲ್ಲಿ ನನಗಾಗಿದ್ದ ವಯಸ್ಸೆಷ್ಟು? ಮತ್ತು ನನ್ನ ತಾತನಿಗಾಗಿದ್ದ ವಯಸ್ಸೆಷ್ಟು?

5. ಸಂಖ್ಯೆಗಳೊಡನೆ ಚೆಲ್ಲಾಟ: ಒಂದೇ ಅಂಕವನ್ನು ನಾಲ್ಕು ಬಾರಿ ಬಳಸಿ 24 ನ್ನು ಬರೆಯಬೇಕು.ಈ ಸಮಸ್ಯೆಗೆ ಕನಿಷ್ಠಪಕ್ಷ ನಾಲ್ಕು ಉತ್ತರಗಳನ್ನು ಬರೆಯುವ ಸಾಧ್ಯತೆಯುಂಟು.ಅವುಗಳಲ್ಲಿ (6+6+6+6=24) ಎಂಬುದು ಒಂದು ಉತ್ತರ ಮಾತ್ರ. ಉಳಿದ ನಮೂನೆಯ ಉತ್ತರಗಳನ್ನು ಬರೆಯಲು ಪ್ರಯತ್ನ ಮಾಡಿ ನೋಡಿ.

ಉತ್ತರಗಳು
1. ಈ ವ್ಯವಹಾರದಲ್ಲಿ ಬಂಗಾರಶೆಟ್ಟಿಗೆ ಆದ ನಷ್ಟ ಕೇವಲ 100 ರೂಪಾಯಿ ಮಾತ್ರ. ಏಕೆಂದರೆ ಖೋಟಾ ನೋಟು 100 ರೂಪಾಯಿಯದ್ದು.
2. ಹಣದ ಎಣಿಕೆಗೆ 2 ವರ್ಷ, 311 ದಿನ, 16ಗಂಟೆ ಹಿಡಿಯುವುದು. 9 ಕೋಟಿ ಅಥವಾ 90 ಮಿಲಿಯನ್ ಎಷ್ಟು ದೊಡ್ಡದೆಂದರೆ ಹಣದ ಎಣಿಕೆ ಆರಂಭವಾದಾಗ ಹುಟ್ಟಿದ ಮಗು ಎಣಿಕೆ ಮುಗಿಯುವ ವೇಳೆಗೆ ಚೆನ್ನಾಗಿ ನಡೆಯಬಲ್ಲದು, ಮಾತನಾಡಬಲ್ಲದು ಮತ್ತು ಬಾಲವಾಡಿಗೆ ಹೋಗಿ ಆಟ ಪಾಠಗಳಲ್ಲಿ ಭಾಗವಹಿಸಬಲ್ಲದು.
3
1

3


2

4
ಇಲ್ಲಿ ಸ್ಥಳಾಂತರಗೊಂಡ ಬೆಂಕಿಕಡ್ಡಿಗಳು ಯಾವುವೆಂದು ಕಂಡುಹಿಡಿಯಿರಿ.
4. 1976ನೇ ಇಸವಿಯಲ್ಲಿ 76 ಎಂಬುದು ಇಪ್ಪತ್ತನೆಯ ಶತಮಾನದಲ್ಲಿ ನಡೆದು ಬಂದ ವರ್ಷಗಳು. ಸಮಸ್ಯೆಯಲ್ಲಿ ಸೂಚಿಸಿರುವಂತೆ 76ರ ವೇಳೆಗೆ ಮೊಮ್ಮಗನಿಗೆ 76ರ ಅರ್ಧದಷ್ಟು ವಯಸ್ಸಾಗಿರಬೇಕು. ಅಂದರೆ ಆತ 1938ರಲ್ಲಿ ಹುಟ್ಟಿರಬೇಕು. ಮೊಮ್ಮಗ 1938ರಲ್ಲಿ ಜನಿಸಿರಬೇಕಾದರೆ ತಾತನ ಜನನ ಕಳೆದ ಶತಮಾನದಲ್ಲಿ ಆಗಿರಬೇಕು. ಆದುದರಿಂದ ಆತನ ವಯಸ್ಸು 176ರ ಅರ್ಧಾಂಶವಾಗಿರಬೇಕು. ಅಂದರೆ 88 ವರ್ಷಗಳು. ಆದುದರಿಂದ ತಾತನ ಜನನ 1888ರಲ್ಲಿ ಆಗಿರಬೇಕು. ತಾತನಿಗೆ 88 ವರ್ಷವಾಗಿದ್ದರೆ ಮೊಮ್ಮಗನಿಗೆ 38 ವರ್ಷ ವಯಸ್ಸಾಗಿರುವುದು ಅಸಂಭವವೇನಲ್ಲ.

5.(1). 3 x 3 x 3 – 3 = 24.  (2). 4 x 4 + 4 + 4 = 24. (3).  6 x 6 – 6 – 6 = 24. (4).  88 – (8 x 8) = 24.

(ಪೋಟೋ ಕೃಪೆ : ಅಂತರ್ಜಾಲ)