ನಿಮ್ಮ ಸ್ನೇಹಿತರ ಜನ್ಮದಿನವನ್ನು ಊಹಿಸಿ!


        ನಿಮ್ಮ ಸ್ನೇಹಿತರ ಅಥವಾ ತರಗತಿಯ ಎಲ್ಲರ ಜನ್ಮದಿನವನ್ನು ಊಹಿಸಿ ಅವರಿಗೆ ಅಚ್ಚರಿಯನ್ನು ಉಂಟುಮಾಡಬಹುದು. ಆದರೆ ಈ ಏಳು ಹಂತಗಳನ್ನು
ಅವರು ಪೂರ್ಣಗೊಳಿಸುವಂತೆ ನೋಡಿಕೊಳ್ಳಬೇಕಷ್ಟೆ.
1. ಅವರು ಹುಟ್ಟಿದ ತಿಂಗಳ ಸಂಖ್ಯೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಉದಾ: ಜನವರಿ-1, ಫೆಬ್ರವರಿ-2 ಹೀಗೆ.
2. ಆ ಸಂಖ್ಯೆಯನ್ನು 5ರಿಂದ ಗುಣಿಸಿ.
3. ಬಂದ ಉತ್ತರಕ್ಕೆ 6ನ್ನು ಸೇರಿಸಿ.
4. ಅದರ ಮೊತ್ತಕ್ಕೆ 4ನ್ನು ಗುಣಿಸಿ.
5. ನಂತರ ಬಂದ ಉತ್ತರಕ್ಕೆ 9ನ್ನು ಕೂಡಿ.
6. ಅದರ ಮೊತ್ತಕ್ಕೆ ಮತ್ತೆ 5ನ್ನು ಗುಣಿಸಲು ಹೇಳಿ.
7. ಬಂದ ಉತ್ತರಕ್ಕೆ ಹುಟ್ಟಿದ ದಿನಾಂಕವನ್ನು ಕೂಡಿ. ಉದಾ: 12ನೇ ತಾರೀಖಿನಲ್ಲಿ ಹುಟ್ಟಿದ್ದರೆ 12ನ್ನು ಕೂಡಬೇಕು.

ಈಗ ಅವರಿಗೆ ಬಂದ ಉತ್ತರವನ್ನು ಹೇಳಲು ಹೇಳಿ. ಅದನ್ನು ನೀವು ಮನಸ್ಸಿನಲ್ಲಿ 165ನ್ನು ಕಳೆದರೆ ಬರುವ ಸಂಖ್ಯೆಯಲ್ಲಿ ಮೊದಲು ಅವರ ತಿಂಗಳು ನಂತರ ಜನ್ಮದಿನಾಂಕ ಇರುತ್ತದೆ!

(ಪೋಟೋ ಕೃಪೆ : ಅಂತರ್ಜಾಲ)