Gireesha H. P.




ಹಾಸನ ಜಿಲ್ಲೆಯ ಒಂದು ಪುಟ್ಟ ಗ್ರಾಮವಾದ ಅನುಘಟ್ಟದಲ್ಲಿ ಗಣಿತ ಪ್ರಯೋಗಾಲಯ ತಲೆಯೆತ್ತಿದೆ. ಅದಕ್ಕೆ ಕಾರಣಕರ್ತರು ಗಿರೀಶ್ ಹೆಚ್.ಪಿ.. ಸರ್ಕಾರಿ ಶಾಲೆಗಳಲ್ಲಿರುವ ಸೌಲಭ್ಯಗಳನ್ನೇ ಬಳಸಿಕೊಂಡು ಗಣಿತ ಪ್ರಯೋಗಾಲಯವನ್ನು ತೆರೆಯುವುದೆಂದರೆ ಅದು ಸಾಮಾನ್ಯವಾದ ಕೆಲಸವಲ್ಲ. ಇಂಥ ಅಸಾಮಾನ್ಯ ಕೆಲಸವನ್ನು ಕೈಗೊಂಡಿರುವುದು ಅವರ ಸೇವಾನಿರತೆಗೆ ಹಿಡಿದ ಕೈಗನ್ನಡಿ.
ಗಿರೀಶ್‌ರವರು ಒಂದರೆ ಕ್ಷಣವೂ ಸುಮ್ಮನೇ ಕೂರುವ ವ್ಯಕ್ತಿಯಲ್ಲ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಗಣಿತದ್ದೇ ಧ್ಯಾನ. ಅವರ ಗಣಿತ ತುಡಿತ ತಿಳಿಯಲು ನೀವು ಅವರೊಂದಿಗೆ ಒಂದು ದಿನ ವ್ಯಯಿಸಿದರೆ ತಿಳಿಯುತ್ತದೆ. ಈ ರೀತಿಯ ಧ್ಯಾನಸ್ಥ ಸ್ಥಿತಿ ಇದ್ದರೆ ತಾನೇ ಏನನ್ನಾದರೂ ಸಾಧಿಸಲು ಸಾಧ್ಯ?
ಅತ್ಯುನ್ನತ ಗುಣಮಟ್ಟದ ಪರಿಕರಗಳನ್ನು ಈ ಪ್ರಯೋಗಾಲಯ ಹೊಂದಿಲ್ಲದಿದ್ದರೂ ತನ್ನ ಸುತ್ತಮುತ್ತ ಸಿಗುವ ವಸ್ತುಗಳಿಂದಲೇ ಮಾದರಿಗಳು ತಯಾರಿಸಿರುವುದು ಇದರ ವಿಶೇಷ. ಗಿರೀಶ್ ಹಾಗೂ ಅವರ ವಿದ್ಯಾರ್ಥಿಗಳ ಸಂಬಂಧ ಬಹಳ ಗಾಢವಾದದ್ದು. ಗಣಿತವೆಂದರೆ ಉಲ್ಲಾಸ ಉತ್ಸಾಹವೆಂಬಂತೆ ಕಲಿಸುತ್ತಿರುವ ಅವರು ವಿದ್ಯಾರ್ಥಿಗಳಲ್ಲೂ ಅದೇ ಭಾವನೆ ಮೂಡಿಸಿರುವುದು ಅವರ ಕೆಲಸ ಸಲೀಸಾಗಿ ಮಾಡಿದೆ.