Ananthadedege Part-1
ಈ ಪುಸ್ತಕವು ಪ್ರೌಢಶಾಲಾ ಹಂತದ ಸಂಖ್ಯಾಶಾಸ್ತ್ರಕ್ಕೆ ಆಕರ ಗ್ರಂಥವಾಗಿ ಬಳಸಬಹುದು. ನಾರಾಯಣಸ್ವಾಮಿಯವರು ಇದನ್ನು ಬಹಳ ಸರಳವಾಗಿ ಎಲ್ಲರಿಗೂ ಅರ್ಥವಾಗುವ ನಿಟ್ಟಿನಲ್ಲಿ ಲೇಖನ ಬರೆದಿರುವುದು ನಿಜಕ್ಕೂ ಮೆಚ್ಚುವಂತದ್ದು. ಸಂಖ್ಯಾಶಾಸ್ತ್ರದ ಪೂರ್ಣ ಚಿತ್ರಣ ನೀಡುವಲ್ಲಿ ಬಹುಪಾಲು ಯಶಸ್ಸು ಗಳಿಸಿದ್ದಾರೆ.ಕನಾಟಕ ಸರ್ಕಾರ 2017-18 ನೇ ಸಾಲಿನಿಂದ 9ನೇ ತರಗತಿಯ ಗಣಿತ ಪಠ್ಯಪುಸ್ತಕವು ಎನ್.ಸಿ.ಇ.ಆರ್.ಟಿ.ಯ ಯಥಾವತ್ತು ಅಳವಡಿಸಿಕೊಂಡಿದೆ. ಅದರ ಸಾಧಕ ಬಾದಕಗಳನ್ನು ಡಾ||ರಾಮಚಂದ್ರರವರು ವಿಶ್ಲೇಷಣೆ ಮಾಡಿದ್ದಾರೆ.
2ರಿಂದ 50 ರವರೆಗಿನ ಸಂಖ್ಯೆಗಳ ವಿಭಾಜ್ಯತೆ ನಿಯಮಗಳನ್ನು ಬಹಳ ಸರಳವಾಗಿ ಹರಿಕೃಷ್ಣ ಹೊಳ್ಳರವರು ನೀಡಿದ್ದಾರೆ. ಇದನ್ನು ಕೂಲಂಕುಶವಾಗಿ ಅಧ್ಯಯನ ನಡೆಸಿದರೆ ಸಂಖ್ಯೆಗಳನ್ನು ನೋಡಿದ ತಕ್ಷಣ ಯಾವ ಸಂಖ್ಯೆಯಿಂದ ಭಾಗಿಸಲ್ಪಡುತ್ತದೆ ಎಂಬುದನ್ನು ತಿಳಿಯಬಹುದಾಗಿದೆ.